:ನೆಲಮಂಗಲ: ನಗರದಲ್ಲಿ ಸುಸಜ್ಜಿತ ಕನ್ನಡ ಸಾಹಿತ್ಯ ಭವನ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸರ್ಕಾರದಿಂದ 5 ಗುಂಟೆ ಜಮೀನು ಮಂಜೂರು ಹಾಗೂ ಅನುದಾನ ಬಿಡುಗಡೆಗೆ ಶ್ರಮ ವಹಿಸುವುದಾಗಿ ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಯಂಟಗಾನಹಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತುನಿಂದ ಆಯೋಜಿಸಿದ್ದ 13ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಪತ್ರಿಯೊಬ್ಬ ಕನ್ನಡಿಗರ ಆಸಕ್ತ ಮನೋಭಾವ ಅತ್ಯಂತ ಮುಖ್ಯವಾಗಿದೆ. ರಾಜ್ಯದ ಜನರಿಗೆ ಭಾಷಾಭಿಮಾನ ಹಾಗೂ ಕನ್ನಡದ ಬಗ್ಗೆ ಅರಿವು ಹಾಗೂ ಗೌರವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ರಾಜ್ಯಾದ್ಯಂತ ಕನ್ನಡ ಜ್ಯೋತಿಯಾತ್ರೆಯನ್ನು ಹಮ್ಮಿಕೊಂಡಿದೆ. ಜತೆಗೆ ವಿಧಾನ ಸೌಧನ ಮುಂಭಾಗದಲ್ಲಿ ತಾಯಿ ಭುವನೇಶ್ವರಿ ದೇವಿಯ ಪುತ್ಥಳಿಯನ್ನುನಿರ್ಮಾಣ ಮಾಡಿದ್ದ ಕೀರ್ತಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತಿದೆ. ಕನ್ನಡಪರ ಕಾರ್ಯಗಳಿಗೆ ಸರ್ಕಾರದ ಹೆಚ್ಚಿನ ಅಧ್ಯತೆ ನೀಡುತ್ತಿದ್ದಾರೆ. ಪ್ರತಿಯೊಬ್ಬ ಹೆತ್ತತಾಯಿಯಂತೆ ಕನ್ನಡ ಭಾಷೆಯನ್ನು ಗೌರವಿಸಿದ್ದಾಗ ಮಾತ್ರ ಭಾಷೆ ಮತ್ತಷ್ಟು ಎತ್ತರಕ್ಕೆ ಬೆಳೆಯಲು ಸಹಕಾರವಾಗುತ್ತದೆ. ಕ್ಷೇತ್ರದಲ್ಲಿ ಕನ್ನಡ ಸಾಹಿತ್ಯ ಪರ ಕೆಲಸ ಕಾರ್ಯಗಳಿಗೆ ಹೆಚ್ಚಿನ ಬೆಂಬಲ ನೀಡುತ್ತಿದ್ದು ಮಂದಿನ ದಿನಗಳಲ್ಲಿ ಸಾಹಿತ್ಯ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಅನುದಾನ ಹಾಗೂ ಜಮೀನು ಮಂಜೂರಾತಿ ವಿಚಾರವಾಗಿ ಶ್ರಮಿಸುತ್ತೇನೆ ಎಂದರು.
13 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಶ್ರೀ ರಮಣಾನಂದನಾಥಸ್ವಾಮೀಜಿ ಮಾತನಾಡಿ
ನಾಡಿನಲ್ಲಿ ಜನಿಸಿದ್ದ ಪತ್ರಿಯೊಬ್ಬರು ತಾಯಿ, ನೆಲ ಸೇರಿದಂತೆ ಗುರುವಿನ ಋಣ ತೀರಿಸುವ ಮಹತ್ವದ ಕಾರ್ಯವನ್ನು ಮಾಡಬೇಕಿದೆ. ರಾಜ್ಯರಾಜಧಾನಿಯ ಹೆಬ್ಬಾಗಿಲಾಗಿರುವ ತಾಲೂಕು ಸಾಕಷ್ಟು ಐತಿಹಾಸಿ ಹಾಗೂ ಪೌರಾಣಿಕ ಇತಿಹಾಸವನ್ನು ಹೊಂದಿದೆ. ದಕ್ಷಿಣಕಾಶಿ ಶಿವಗಂಗೆ, ಸಿದ್ದರಬೆಟ್ಟ, ಗಂಗರ ರಾಜಧಾನಿ ಮಾನ್ಯಪುರ ಮಣ್ಣೆ ಸೇರಿದಂತೆ ರಾಜ ಮನೆತನಗಳನ್ನು ಹೊಂದಿದ್ದು ಕಾಣಬಹುದಾಗಿದೆ. ತಾಲೂಕಿನಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಹಲವಾರು ಮಂದಿ ಕೊಡುಗೆಯನ್ನು ನೀಡಿದ್ದಾರೆ. ತಾಲೂಕಿನಲ್ಲಿ ಸುಸರ್ಜ್ಜಿತ ರಂಗ ಮಂದಿರ ಇಲ್ಲದೆ ಇರುವುದು ನೋವಿನ ಸಂಗತಿ ತಾಲೂಕಿನಲ್ಲಿ ಮುಂದಿನ ದಿನಗಳಲ್ಲಿ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾ ಹಿಸುವ ನಿಟ್ಟಿನಲ್ಲಿ ರಂಗ ಮಂದಿರ ಅವಶ್ಯಕತೆ ತುಂಬಾಯಿದೆ. ಅದ್ದರಿಂದ ಮುಂದಿನ ದಿನಗಳಲ್ಲಿ ರಂಗ ಮಂದಿರ ನಿರ್ಮಾಣಕ್ಕೆ ಮುಂದಾಗಬೇಕಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮಾಂತರ ಜಿಲ್ಲಾದ್ಯಕ್ಷ
ಪ್ರೋ.ಬಿ.ಎನ್.ಕೃಷ್ಣಪ್ಪ ಮಾತನಾಡಿ ಕಳೆದ 1915ರ ಮೇ.05 ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ನಾಡು ನುಡಿ ಸಂರಕ್ಷಣೆಗಾಗಿ ಕನ್ನಡ ಸಾಹಿತ್ಯ ಪರಿಷತ್ತುನನ್ನು ಸ್ಥಾಪನೆ ಮಾಡಿದ್ದಾರೆ. ರಾಜ್ಯ ಮಟ್ಟ , ಜಿಲ್ಲಾ ಮಟ್ಟ ಸೇರಿದಂತೆ ತಾಲೂಕು ಮಟ್ಟದಲ್ಲಿ ಸಮ್ಮೇಳನ ನಡೆಸಿಕೊಂಡು ಬರಲಾಗುತ್ತಿದೆ. ಕನ್ನಡ ಭಾಷೆ 2.5ಸಾವಿರಗಳ ಇತಿಹಾಸಹೊಂಡಿದ್ದು ಐತಿಹಾಸಕವಾಗಿ ಸಾಹಿತ್ಯವಾಗಿ ಹಿರಿಮೆಯನ್ನು ಹೊಂದಿದೆ. ರಾಜ್ಯ ಸರ್ಕಾರ ಕನ್ನಡಸಾಹಿತ್ಯದ ಬಗ್ಗೆ ಅಪಾರವಾದ ಕಾಳಜಿ ಹೊಂಡಿದ್ದು ಇತ್ತೀಚಿನ ದಿನಗಳಲ್ಲಿ ವಿಧಾನಸೌದ ಬಳಿ ಕನ್ನಡ ಪುಸ್ತಕ ಮೇಳಾವನ್ನು ಆಯೋಜನೆ ಸೇರಿದಂತೆ ಸಾಕಷ್ಟು ಮೈಲಿಗಲ್ಲುಗಳನ್ನು ಹಾಕಿದೆ. ಜತೆಗೆರಾಜ್ಯದಲ್ಲಿ ಉತ್ಪಾದನೆ ಯಾಗುವ ವಸ್ತುಗಳ ಮೇಲೆ ಕನ್ನಡ ಭಾಷೆಯನ್ನು ಕಡ್ಡಾಯ ಬಳಕೆ ಮಾಡುವಂತಹ ಮಹತ್ವ ಯೋಜನೆ ಜಾರಿಗೊಳಿಸಿದೆ. ಅನ್ಯ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ತಾಯಿ ಭಾಷೆಯನ್ನು ಸಂರಕ್ಷಣೆ ಮಾಡಬೇಕಿದೆ ಎಂದರು.
ಧ್ವಜರೋಣ ಹಾಗೂ ಮೆರವಣಿಗೆ: ಯಂಟಗಾನಹಳ್ಳಿ ಸರ್ಕಾರಿ ಶಾಲೆ ಅವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ ಹಿನ್ನಲೆ ರಾಷ್ಟ್ರಧ್ವಜಾ ರೋಣವನ್ನು ಗ್ರಾಮಪಂಚಾಯಿತಿ ಅದ್ಯಕ್ಷ ಹೆಚ್.ಎ.ರಾಹುಲ್ ಗೌಡ, ನಾಡ ಧ್ವಜ ಹಾಗೂ ಪರಿಷತ್ತು ಧ್ವಜ ವನ್ನು ತಹಸೀಲ್ದಾರ್ ಅಮೃತ್ ಆತ್ರೇಶ್ ಧ್ವಜರೋಹಣವನ್ನು ಬೆಳಗ್ಗೆ 8 ಗಂಟೆಗೆ ನೇರವೇಸಿಕೊಟ್ಟರು. ಬಳಿಕ ಲ್ಯಾಂಕೋ ದೇವಿಹಳ್ಳಿ ಟೋಲ್ ಬಳಿಯ ಶ್ರೀ ಗೂಬೆಕಲ್ಲಮ್ಮ ದೇವಾಲಯ ದಿಂದ ಸಮ್ಮೇಳನಾಧ್ಯಕ್ಷ ಶ್ರೀರಮಣಾನಂದನಾಥಸ್ವಾಮೀಜಿ ಅವರನ್ನು ಬೆಳ್ಳಿ ರಥದಲ್ಲಿ ನಗರದ ಮುಖರಸ್ತೆಯಲ್ಲಿ ವಿವಿಧ ಜಾನಪದ ಕಲಾ ಪ್ರಕಾರಗಳೊಂದಿಗೆ ವೇದಿಕೆಗೆ ಕರೆತರಲಾಯಿತು. ಜತೆಗೆ ಖ್ಯಾತ ಜಾನಪದ ಗಾಯಕ ಚಿಕ್ಕಮಾರನಹಳ್ಳಿಸಿದ್ದಯ್ಯ ಅವರಿಂದ ಗೀತಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮಳಿಗೆ ಉದ್ಘಾಟನೆ: ಸಮ್ಮೇಳನ ಹಿನ್ನಲೆ ಆಯೋಜಿಸಿದ್ದ ಪುಸ್ತಕ ಮಳಿಗೆಯನ್ನು ವಾಣಿಜ್ಯ ಮಳಿಗೆಯನ್ನು, ವಾಣಿಜ್ಯ ಮಳಿಗೆಯನ್ನುಸಮ್ಮೇಳನಾಧ್ಯಕ್ಷ ಶ್ರೀ ರಮಣಾನಂದನಾಥಸ್ವಾಮೀಜಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಉದ್ಘಾಟಿಸಿದ್ದು. ಜತೆಗೆ ಸಮ್ಮೇಳನದಲದಲಿ ಬಿಜಿಎಸ್ ಆಸ್ಪತ್ರೆಯಿಂದ ವಿವಿಧ ಅರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದು ಸಾಕಷ್ಟು ಮಂದಿ ಪ್ರಯೋಜನ ಪಡೆದುಕೊಂಡರು.
ವಿಚಾರ ಗೋಷ್ಠಿ: ಜಾನಪದ ಮತ್ತು ಕನ್ನಡ ಸಾಹಿತ್ಯ ಕುರಿತು ವಿಜಯ ಸಂಜೆ ಕಾಲೇಜು ಉಪ ಪ್ರಾಂಶುಪಾಲ ಶಾಂತರಾಜು, ಕನ್ನಡ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಕುರಿತು ಶಿಕ್ಷಣ ಸಂಯೋಜಕಿ ಸುಚಿತ್ರ ವಿಚಾರವನ್ನು ಮಂಡಿಸಿದ್ದರು.
ಸಮ್ಮೇಳನಕ್ಕೆ ಬಹುತೇಕ ಮಂದಿ ಗೈರು: 13 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನಲೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದ 30ಕ್ಕೂ ಹೆಚ್ಚು ಮಂದಿಯನ್ನು ಗುರುತಿಸಿದ್ದು ಕಾರ್ಯಕ್ರಮದಲ್ಲಿ ಸುಮಾರು 15 ಮಂದಿ ಮಂದಿಮಾತ್ರ ಸನ್ಮಾನ ಪಡೆದುಕೊಂಡಿದ್ದು ಉಳಿಕೆ ಮಂದಿ ಸನ್ಮಾನಿತರು ಗೈರಾಗಿದ್ದರು. ಜತೆಗೆ ಕವಿಗೋಷ್ಠಿಯಲ್ಲಿ ಭಾಗವಹಿಸಬೇಕಾದ ಬಹುತೇಕ ಸಾಹಿತಿಗಳು ಹಾಗೂ ಬಹುತೇಕ ನಿಕಟಪೂರ್ವ ಅದ್ಯಕ್ಷರುಗಳು, ಕನ್ನಡ ಸಂಘಟನೆಗಳ ಅದ್ಯಕ್ಷರು ಸೇರಿದಂತೆ ಸಾಹಿತ್ಯ ಪರಿಷತ್ತುನ ತ್ಯಾಮಗೊಂಡ್ಲು ಹೋಬಳಿ, ಸೋಂಪುರ ಹೋಬಳಿ ಹಾಗೂ ತಾಲೂಕು ಸಮಿತಿ ಸಾಕಷ್ಟು ಮಂದಿ ಕಾರ್ಯಕ್ರಮಕ್ಕೆ ಗೈರಾಗಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ತಾಲೂಕು ಕಲಾವಿದರ ಬಳದ ಅಧ್ಯಕ್ಷ ಡಾ.ಜಿ. ಗಂಗರಾಜು, ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮಾಂತರ ಜಿಲ್ಲಾದ್ಯಕ್ಷ ಕೃಷ್ಣಪ್ಪ, ಕೋಶಾಧ್ಯಕ್ಷ ಎಂ.ನಾರಾಯಣ್ ಗೌಡ, ಜಿಲ್ಲಾ ಮಹಿಳಾ ಪತ್ರಿನಿಧಿ ಮಂಜುಳಾಸಿದ್ದರಾಜು, ನಗರ ಅಧ್ಯಕ್ಷ ಮಲ್ಲೇಶ್, ತಾಲೂಕು ಪ್ರತಿನಿಧಿ ಸಿ.ಹೆಚ್,ಸಿದ್ದಯ್ಯ, ಬೂದಿಹಾಲ್‌ಕಿಟ್ಟಿ, ವಿಜಯ್‌ವೀಳ್ಯದೆಲೆ, ಶಿವಲಿಂಗಯ್ಯ, ಉದ್ಯಮಿ ಭವಾನಿಶಂಕರ್‌ಮಂಜುನಾಥ್, ಚಿಕ್ಕಹನುಮೇಗೌಡ, ಗ್ರಾಮಪಂಚಾಯಿತಿ ಅದ್ಯಕ್ಷ ರಾಹುಲ್‌ಗೌಡ, ಮಾಜಿ ಅದ್ಯಕ್ಷೆ ಲಕ್ಷ್ಮಮ್ಮಮುನಿರಾಜು, ಸದಸ್ಯ ಮಂಜುನಾಥಯ್ಯ, ಮುಖಂಡ ಹೇಮಂತ್‌ಕುಮಾರ್, ಟಿ.ನಾಗರಾಜು, ಸಿ.ಎಂ.ಗೌಡ, ಎಂ.ಕೆ.ನಾಗರಾಜು, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
More Stories
ಮಕ್ಕಳ ಹಕ್ಕುಗಳ ಉಲ್ಲಂಘನೆ ಶಿಕ್ಷಾರ್ಹ ಅಪರಾಧ: ಕೆ.ನಾಗಣ್ಣ ಗೌಡ
ಪಕ್ಷದ ಬಲವರ್ಧನೆಗಾಗಿ ಎಲ್ಲರೂ ಕೈ ಜೋಡಿಸಿ : ನಿಸರ್ಗ ನಾರಾಯಣಸ್ವಾಮಿ
ಶ್ರೀಶೈಲ ಪಬ್ಲಿಕ್ ಸ್ಕೂಲ್ ನಲ್ಲಿ ಅಂತರಾಷ್ಟ್ರೀಯ ವಿಜ್ಞಾನ ದಿನಾಚರಣೆ