ಗಂಗಾವತಿ ನಗರದ ಶ್ರೀಶೈಲ ಪಬ್ಲಿಕ್ ಶಾಲೆಯಲ್ಲಿ ಅಂತರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲೆಯ ವಿಧ್ಯಾರ್ಥಿಗಳಿಂದ ವಿವಿಧ ಬಗೆಯ ವಿಜ್ಞಾನ ದ ಮಾದರಿಗಳಿದ್ದು ಎಲ್ಲ ಮಾದರಿಗಳ ಬಗ್ಗೆ ಬೇಬಿಕ್ಲಾಸ್ ಮತ್ತು ಏಳನೇ ತರಗತಿಯ ವಿದ್ಯಾರ್ಥಿಗಳು ವಿಸ್ತಾರವಾಗಿ ವಿವರಿಸಿದರು.
ಮುಖ್ಯೋಪಾಧ್ಯಾಯರಾದ ರೇಖಾ ಜೇಕಿನ್ ಮಾತನಾಡಿ ಆವಿಷ್ಕಾರ ಮೇಳ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಕಲಿಸುತ್ತದೆ ಹಾಗೂ ಎಲ್ಲಾ ವಿದ್ಯಾರ್ಥಿಗಳಲ್ಲಿ ಕ್ರಿಯೇಟಿವಿಟಿ ಬೆಳೆದು ಅವರು ಮುಂದೆ ವಿಜ್ಞಾನಿಗಳಾಗಬಹುದು ಮತ್ತು ಸಿ ವಿ ರಾಮನ್ ಅವರ ರಾಮನ್ ಪರಿಣಾಮದ ಸಂಪೂರ್ಣ ಮಾಹಿತಿಯನ್ನು ನೀಡಿ ರಾಮನ್ ಪರಿಣಾಮ ಸಂಶೋಧನೆಯನ್ನು ೧೯೨೮ ಫೆಬ್ರವರಿ ೨೮ರಂದು ಈ ಜಗತ್ತಿಗೆ ಪರಿಚಯಿಸಲಾಯಿತು ಮತ್ತು ಈ ಸಂಶೋಧನೆ ನಡೆದ ಎರಡು ವರ್ಷಗಳ ನಂತರ ರಾಮನ್ ಪರಿಣಾಮದ ಸಂಶೋಧನೆಗೆ ೧೯೩೦ರಲ್ಲಿ ನೊಬೆಲ್ ಪ್ರಶಸ್ತಿಯನ್ನು ನೀಡಿದರು ಹಾಗೂ ಅಂದಿನಿಂದ ರಾಮನ್ ಪರಿಣಾಮ ಸಂಶೋಧನೆಯ ಪ್ರಯುಕ್ತ ಫೆಬ್ರವರಿ ೨೮ರಂದು ಪ್ರತಿವರ್ಷ ರಾಷ್ಟ್ರೀಯ ವಿಜ್ಞಾನದ ದಿನಾಚರಣೆ ಆಚರಿಸಲಾಗುತ್ತದೆ ಎಂದು ಹೇಳಿದರು ಹಾಗೂ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಮಿನಿ ವಿಜ್ಞಾನ ಕೇಂದ್ರಗಳು ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಈ ವಿಜ್ಞಾನ ಕೇಂದ್ರದಿಂದ ಚಟುವಟಿಕೆಗಳನ್ನು ಬೇಬಿಕ್ಲಾಸ್ ಮತ್ತು ಏಳನೇಯ ತರಗತಿ ವಿದ್ಯಾರ್ಥಿಗಳಿಗೆ ನಾವಿನ್ಯತೆ ಚಟುವಟಿಕೆಗಳನ್ನು ತರಗತಿಗಳ ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುವ ಉದ್ದೇಶದಿಂದ ಸಾಕಷ್ಟು ಮಾದರಿಗಳನ್ನು ಮಾಡಿಸಿ ಸಮಸ್ಯೆ ಪರಿಹಾರ ಹಾಗೂ ಅನುಭೂತಿ ನಕ್ಷೆ ಮುಂತಾದ ವಿಷಯಗಳನ್ನು ಕಲಿಸಿ ಒಂದು ಮೂಲ ಮಾದರಿಯ ಮುಖಾಂತರ ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸಬಹುದು ಎಂದುತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ನಿರುಪಾದಿಗೌಡ ಜೇಕಿನ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿಗಳಾದ ಈರಮ್ಮ,ಶಿಲ್ಪ,ವೀರೂಪಮ್ಮ,ರೇಣುಕಾ, ಸಿದ್ದಮ್ಮ, ವಿದ್ಯಾರ್ಥಿಗಳು ಇದ್ದರು.
More Stories
ನೆಲಮಂಗಲ ತಾಲೂಕಿನ 13ನೇ ಕನ್ನಡ ಸಾಹಿತ್ಯ ಸಮ್ಮೇಳನ
ಮಕ್ಕಳ ಹಕ್ಕುಗಳ ಉಲ್ಲಂಘನೆ ಶಿಕ್ಷಾರ್ಹ ಅಪರಾಧ: ಕೆ.ನಾಗಣ್ಣ ಗೌಡ
ಪಕ್ಷದ ಬಲವರ್ಧನೆಗಾಗಿ ಎಲ್ಲರೂ ಕೈ ಜೋಡಿಸಿ : ನಿಸರ್ಗ ನಾರಾಯಣಸ್ವಾಮಿ