April 28, 2025

ಪಕ್ಷದ ಬಲವರ್ಧನೆಗಾಗಿ ಎಲ್ಲರೂ ಕೈ ಜೋಡಿಸಿ : ನಿಸರ್ಗ ನಾರಾಯಣಸ್ವಾಮಿ

ಮುಂದಿನ ದಿನಗಳಲ್ಲಿ ಬರಲಿರುವ ತಾಲೂಕು ಪಂಚಾಯತಿ ಹಾಗೂ ಜಿಲ್ಲಾಪಂಚಾಯತಿ ಚುನಾವಣೆಗೆ ತಾಲೂಕಿನ ಪ್ರತಿಯೊಬ್ಬ ಮುಖಂಡ, ಕಾರ್ಯಕರ್ತರೊಂದಿಗೆ ಎಲ್ಲರೂ ಒಗ್ಗೂಡಿ ನನ್ನೊಂದಿಗೆ

ಪಕ್ಷದ ಬಲವರ್ಧನೆಗಾಗಿ ಕೈಜೋಡಿಸಿ ಗೆಲುವಿಗೆ ಕಾರಣಕರ್ತರಾಗಬೇಕು ಎಂದು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

 

ದೇವನಹಳ್ಳಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಜೆಡಿಎಸ್ ಪಕ್ಷದಿಂದ ಪಿ.ಎಲ್.ಡಿ ಬ್ಯಾಂಕ್, ಟಿ.ಎ.ಪಿ.ಎಂ.ಎಸ್ ನಿರ್ದೇಶಕರು ಹಾಗೂ ಪುರಸಭೆ ಉಪಾಧ್ಯಕ್ಷರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

 

ತಾಲೂಕಿನ ಸಹಕಾರಿ ಸಂಘಗಳಲ್ಲಿ ಚುನಾಯಿತರಾದ ನಿರ್ದೇಶಕರಿಗೆ ಸನ್ಮಾನಿಸಿದ್ದೇವೆ ಮುಂದಿನ ದಿನಗಳಲ್ಲಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಹಾಗೂ ವಿ.ಎಸ್.ಎಸ್.ಎನ್ ನಿರ್ದೇಶಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೇವೆ. ಸನ್ಮಾನ ಕಾರ್ಯಕ್ರಮದ ಏರ್ಪಡಿಸುತ್ತಿರುವುದು ಪಕ್ಷದ ಬಲವರ್ದನೆ ಹಾಗೂ ಸಂಘಟನೆಗಾಗಿ ಮುಂಬರುವ ಚುನಾವಣೆಯನ್ನು ದೃಷ್ಠಿಕೋನದಲ್ಲಿಟ್ಟುಕೊಂಡು ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಕಾರ್ಯಕರ್ತರನ್ನು ಹುರಿದುಂಬಿಸಲು ಈಗಿನಿಂದಲೇ ಪ್ರಾರಂಭಿಸುತ್ತಿದ್ದೇವೆ ಎಂದರು.

 

ಇದೆ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಮುನೇಗೌಡ, ತಾಲೂಕು ಅಧ್ಯಕ್ಷ ಆರ್. ಮುನೇಗೌಡ ,ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಜೆಡಿಎಸ್ ಟೌನ್ ಅಧ್ಯಕ್ಷ ಮುನಿನಂಜಪ್ಪ, ಪುರಸಭೆ ಮಾಜಿ ಸದಸ್ಯ ವಿ.ಗೋಪಾಲ್,

ಮುಖಂಡರುಗಳಾದ ದೊಡ್ಡಸಣ್ಣೇ ಮುನಿರಾಜು,ಎಸ್.ಎಲ್.ನಾರಾಯಣಸ್ವಾಮಿ , ಕಾಮೇನಹಳ್ಳಿ ರಮೇಶ್,ಪಟಾಲಪ್ಪ, ಭೀಮರಾಜು ಬಿ.ಎಸ್,ಎ .ದೇವರಾಜ್ ,ಹೊಸಳ್ಳಿ ಟಿ .ರವಿ ,ಜೊನ್ನಳ್ಳಿ ಮುನಿರಾಜು , ರಾಜಣ್ಣ.ಸಿ.ಎಸ್ , ಚೌಡಪ್ಪನಹಳ್ಳಿ.ಎಂ.ಹನುಮಪ್ಪ.ಬಿ.ಕೆ, ಶಂಕರ್,ಆಸಾ,ಅನ್ನಪೂರ್ಣ,ಮೀನಾಕ್ಷಿ

ಪಿ.ಎಲ್.ಡಿ ಬ್ಯಾಂಕ್, ಟಿ.ಎ.ಪಿ.ಸಿ.ಎಂ.ಎಸ್‌ನ ನಿರ್ದೇಶಕರು ತಾಲೂಕಿನ ಮುಖಂಡರು ಕಾರ್ಯಕರ್ತರು ಭಾಗಿಯಶಗಿದ್ದರು.